Breaking News

ಕರ್ನಾಟಕ

ಸುರಿಯದ ಮಳೆ ,ಸಂಕಷ್ಟದಲ್ಲಿ ರೈತನ ಬೆಳೆ, ನೀರಿಗಾಗಿ ಟ್ಯಾಂಕರ್‌ ಮೋರೆಹೋದ ರೈತರು.

ಹುಬ್ಬಳ್ಳಿ: ಆಕಾಶದಲ್ಲಿ ಮೋಡಗಳು ಆವರಿಸುತ್ತಿವೆ, ಆದರೆ ಮಳೆ ಹನಿ ಮಾತ್ರ ಕಾಣುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿನ ರೈತರು ಸಾಲದಲ್ಲಿ ಸಿಲುಕಿರುವ ಹಿನ್ನಲೆ ಇದೀಗ ಮುಂಗಾರು ಮಳೆಯ ಅವಕೃಪೆಯಿಂದ ಕಂಗೆಟ್ಟಿದ್ದಾರೆ. ಕುಡಿಯುವ ನೀರಿನ ಪರದಾಟದೊಂದಿಗೆ ಈಗ ಹಣವನ್ನು ಖರ್ಚು ಮಾಡಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡು ಮತ್ತೊಂದು ಹಂಗಾಮಿಗೆ ಸಿದ್ಧತೆಯಾಗಬೇಕಿತ್ತು. ಆದರೆ ತುಂತುರು ಮಳೆ ಕೂಡ ಸುರಿಯದ ಪರಿಣಾಮ ಬರಗಾರಲದ ಭಯ …

Read More »

ಸಾಗುವಾನಿ ಮರಗಳ್ಳರನ್ನು ಕಾಯುತ್ತಿದ್ದಾರಾ..? ಅರಣ್ಯ ಇಲಾಖೆಯ ಅಧಿಕಾರಿಗಳು ..?

ಕಲಘಟಗಿ ರೈತನ ಜಮೀನಿನಲ್ಲಿ ಇದ್ದ 60 ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಪರವಾನಿಗೆ ಪಡೆಯದೆ ಮರಗಳನ್ನು ಕತ್ತರಿಸಿ ಮಾರಾಟ ಮಾಡಲಾಗಿದೆ ಎಂದು ರೈತನೊಬ್ಬರು ಆರೋಪಿಸಿದ್ದಾರೆ. ಕಲಘಟಗಿ ಪಟ್ಟಣದ ರೈತನ ಜಮೀನು [ರಿ.ಸ.ನಂ 275/1 ರಲ್ಲಿ ಬೆಳೆದ ಸಾಗುವಾನಿ ಮರಗಳನ್ನು ಕತ್ತರಿಸಿಲಾಗಿದೆ. ಸುಮಾರ 2 ಎಕರೆ 37 ಗುಂಟೆ ಜಮೀನಿನಲ್ಲಿ ಬೆಳೆದ 150 ಕ್ಕೂ ಹೆಚ್ಚು ಮರಗಳಲ್ಲಿ 60 ಕ್ಕು ಹೆಚ್ಚು ಸಾಗುವಾನಿ ಮರಗಳನ್ನು ಕತ್ತರಿಸಿದ್ದಾರೆ. ಗುಡ್ ನ್ಯೂಸ್ ವೆಲ್ ಪೇರ್ …

Read More »

ಜಗತ್ತಿಗೆ ಮೂರು ಗಂಡಾಂತರ, ಸಾವು ನೋವುಗಳ ಸಂಖ್ಯೆ ಹೆಚ್ಚಳ, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ,ಕೋಡಿಮಠದ ಶ್ರೀಗಳ ಭವಿಷ್ಯವಾಣಿ;

ಹುಬ್ಬಳ್ಳಿಯಲ್ಲಿ ಇಂದು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ಮತ್ತೆ ಜಗತ್ತೀನಲ್ಲಿ ನಡೆಯುವ ಗಂಡಾಂತರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಒಂದು ಸರ್ಕಾರ ಬರುತ್ತೆ. ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ಈಗ ನಿಜವಾಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತೆ , ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ …

Read More »

ಬಸವರಾಜ ಯತ್ನಾಳ ಅವರಿಂದ ಟ್ವೇಟ್‌ ಬಾಂಬ್‌ , ಆಧಿಕಾರಿಗಳು ಕಾಂಗ್ರೇಸ್‌ ಪಕ್ಷದ ಗುಪ್ತ ಸಭೆಯಲ್ಲಿ ಭಾಗಿಯಾಗಿದ್ದು ಏಕೆ ?

ಕಾಂಗ್ರೇಸ್‌ ಪಕ್ಷದ ನಾಯಕರುಗಳು ನಿನ್ನೆ ನಡೆದ ಉಸ್ತುವಾರಿ ಸಭೆಯಲ್ಲಿ ರಾಜ್ಯ ಪ್ರಮುಖ ಐಎಎಸ್‌ ಅಧಿಕಾರಿಗಳು ಬಾಗಿಯಾಗಿದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ, ಈ ಹಿನ್ನಲೆಯಲ್ಲಿ ಬಿಜೆಪಿ ಪೈರ್‌ ಬ್ಯಾಂಡ್‌ ನಾಯಕ ಬಸವರಾಜ್‌ ಯತ್ನಾಳ ಟ್ವೀಟ್‌ ಮಾಡುವ ಮೂಲಕ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಡೆಸುವ ಸಭೆಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿಗಳಿಗೆ ಏನು ಕೆಲಸ? ಬಿಬಿಎಂಪಿ ಚುನಾವಣೆಗೆ ಸಂಗ್ರಹ ಮಾಡಲು ಸೂಚಿಸಿದ್ದಾರೆಯೇ? ಬಿಬಿಎಂಪಿ ವಾರ್ಡ್ …

Read More »

ಮೃತ ಸನ್ಯಾಸಿ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆ !

ಚಿತ್ರದುರ್ಗ ; ಮೃತ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಮನೆಯಲ್ಲಿ ವಿವಿಧೆಡೆ ಇರಿಸಿದ್ದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಹೊಳಲ್ಕೆರೆಯಲ್ಲಿ ವಾರದ ಹಿಂದೆ ಗಂಗಾಧರ ಶಾಸ್ತ್ರಿ(70) ಎಂಬುವವರು ಮೃತಪಟ್ಟಿದ್ರು.‌ ಒಂಟಿಯಾಗಿ ಬದುಕು ಸವೆಸಿದ್ದ ಗಂಗಾಧರ ಶಾಸ್ತ್ರಿ ಅವರು, ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಶಾಸ್ತ್ರಿ ಹೆಸರಲ್ಲಿ 16 ಎಕರೆ‌ ಜಮೀನಿದ್ದು, 4ಎಕರೆ ತೆಂಗಿನ ತೋಟ, ಗದ್ದೆ …

Read More »

ನರಗುಂದ ಠಾಣೆ ಮೆಟ್ಟಿಲು ಏರಿದ ಅಣ್ಣ – ತಮ್ಮಂದಿರ ಜಗಳ …

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ 112 ತುರ್ತು ಸಹಾಯವಾಣಿಗೆ ಚಿಕ್ಕನರಗುಂದ ಗ್ರಾಮದಲ್ಲಿ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಅಣ್ಣ ತಮ್ಮಂದಿರ ನಡುವೆ ಜಗಳವಾಗಿದ್ದು, ಸ್ಥಳದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಮುಂದಿನ ಕ್ರಮಕ್ಕಾಗಿ ನರಗುಂದ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಂತರಿಸಲಾಗಿದೆ. ಕ್ಷುಲಕ ಕಾರಣಕ್ಕಾಗಿ ಜಗಳವಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಧ್ಯ ಪ್ರಕರಣ ನರಗುಂದ ಪೋಲಿಸ್‌ ಠಾಣೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ,

Read More »

ಹುಬ್ಬಳ್ಳಿಯಲ್ಲಿ ಮತ್ತೆ ನಾಯಿಕೊಡೆಗಳೆಂತೆ ಪುನರಾಂಭಗೊಂಡ ಸ್ಪಾಗಳು.[ಮಸಾಜ್‌ ಸೆಂಟರ್]

ಹುಬ್ಬಳ್ಳಿ ಬ್ರೇಕಿಂಗ್ ಹುಬ್ಬಳ್ಳಿಯಲ್ಲಿ ಸ್ಪಾಗಳ ಹಾವಳಿ ಕುಣ್ಣು ಮುಚ್ಚಿ ಕುಳಿತ ಮಹಾನಗರ ಪಾಲಿಕೆ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು…? ನಾಮಕ ಅವಸ್ಥೆ ಎರಡು ದಿನ ಮಾತ್ರ ಸ್ಪಾ ಬಂದ್ ಮಾಡಿದ ಅಧಿಕಾರಿಗಳು..ಪುನರ್ ಆರಂಭಗೊಂಡ ಸ್ಪಾ ಮಾಲೀಕರು ಅವ್ಯವಹಾರ.. ಸ್ಪಾ ಮಾಲೀಕರ ಉಪಟಳಕ್ಕೆ ಸಾರ್ವಜನಿಕರ ಅಕ್ರೋಶ ಹುಬ್ಬಳ್ಳಿಯಲ್ಲಿ ವ್ಯಶ್ಯೆವಾಟಿಕೆ ತಾಣಗಳಾದ ಸ್ಪಾ ಸೆಂಟರ್ ಗಳು..? ಸ್ಪಾ ಸೆಂಟರ್ ಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ನಿರ್ಲಕ್ಷ್ಯ..? ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಅಕ್ರೋಶ

Read More »

ಆಸ್ತಿಗಾಗಿ ಅಣ್ಣನಿಂದ ತಮ್ಮನ ಕೊಲೆ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ತಮ್ಮನನ್ನೇ ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ. ಗದಗ ಜಿಲ್ಲೆಯ ರೋಣ ಪಟ್ಟಣದ ಬಳಿಯ ಜಮೀನಿನಲ್ಲಿ ಇಂದು ಮಧ್ಯಾಹ್ನ ಜರುಗಿದ್ದು, ಶೇಕಪ್ಪ ನವಲಗುಂದ (36) ಎಂಬಾತನೇ ಕೊಲೆಗೀಡಾದ ವ್ಯಕ್ತಿ. ಮೃತ ಶೇಕಪ್ಪ ಹುಬ್ಬಳ್ಳಿಯ ಬಿ ಆರ್ ಟಿಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಕಲಹ ನಡೆದಿತ್ತು ಎನ್ನಲಾಗಿದ್ದು, ಇಂದು …

Read More »

ರೈತರು ಬೆಳೆದ ಧಾನ್ಯಗಳನ್ನು ಕಳ್ಳತನ ಮಾಡಿದ ಕಳ್ಳರ ಬಂಧನ

ಧಾರವಾಡ : ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ದವಸ, ಧಾನ್ಯ ಕಳ್ಳತನ ಮಾಡಿದ್ದ ಮೂವರನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವಲಗುಂದದ ಕಿರಣ್ ಕುಂಬಾರ, ಅಣ್ಣಿಗೇರಿಯ ಕೃಷ್ಣಾ ಗಾಣದಾಳ ಹಾಗೂ ವಿಜಯ ಉಣಕಲ್ ಎಂಬುವವರೇ ಬಂಧಿತ ಆರೋಪಿಗಳು. ನವಲಗುಂದದ ರಾಮಲಿಂಗೇಶ್ವರ ಓಣಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 80 ಚೀಲ ಧಾನ್ಯಗಳನ್ನು ಈ ಮೂವರೂ ಸೇರಿ ಕಳ್ಳತನ ಮಾಡಿದ್ದರು. ಈ ಸಂಬಂಧ ನವಲಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ …

Read More »

ಕುಡಿಯುವ ನೀರಿನ ಸಮಸ್ಯೆ ಹಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕ ಕೋನರೆಡ್ಡಿ

ಇಂದು ಮುಂಜಾನೆ ಶಾಸಕಾದ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ನವಲಗುಂದ ನಗರದ ನೀಲಮ್ಮನ ಕೇರೆ ಹಾಗೂ ಚೆನ್ನಮ್ಮನ ಕೇರೆಗೆ ಬೇಟಿ ನೀಡಿ ನಗರದ ಜನತೆಗೆ ನೀರಿನ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಸಿದರು. ನಂತರ ಈಜುಕೊಳ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ನವಲಗುಂದ ಪಟ್ಟಣದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. …

Read More »