Breaking News

ಕರ್ನಾಟಕ

ಗ್ರಾಮ ಪಂಚಾಯತಿ ಅಧ್ಯಕ್ಷರ ಲಂಚಾವತಾರ

ರಾಯಚೂರು: ಬಡವರಿಗೆ ಕೊಡುವ ಆಶ್ರಯ ಮನೆಗಳು ಹಾಕುವುದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಲಂಚ ಪಡೆದಿರುವ ಘಟನೆ ಸಿಂಧನೂರು ತಾಲ್ಲೂಕಿನ ಗೋನವಾರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.‌ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪದ್ಮಾವತಿ ಗಂಡ ನಾರಯಣರೆಡ್ಡಿ ಧುಮತಿ ಲಂಚ ಪಡೆದವರುಗೋನವಾರ ಗ್ರಾಮದ ನಿಂಗಯ್ಯ ತಂದೆ ಯಕೊಂಬ ಹತ್ತಿರ ೧೦೦೦೦ ಸಾವಿರ ಪಡೆದುಕೊಂಡು ಇಲ್ಲಿಯವರೆಗೂ ಮನೆ ಹಾಕಿಲ್ಲ ಎಂದು ಬಡವರು ತಮ್ಮ ಗೋಳು ತೋಡಿಕೊಂಡಿದ್ದಾರೆ.

Read More »

ಕಮಡೊಳ್ಳಿಗೆ ಶ್ರದ್ಧಾಂಜಲಿ ಅರ್ಪಿಸಿ ಆಕ್ರೋಶ ಹೊರಹಾಕಿದ ಕಾರ್ಯಕರ್ತರು

ಚಿಕ್ಕೋಡಿ: ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಠಳ್ಳಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪೋಟೋಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವಾಟ್ಸಅಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಕುಮಠಳ್ಳಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿರುವ ಭಾವಚಿತ್ರ ವೈರಲ್ ಆಗಿದೆ. ಮಹೇಶ ಕುಮಠಳ್ಳಿ ವರ್ತನೆಯಿಂದ ಜೆಡಿಎಸ್,ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಿದ್ದು ಈ ಮೂಲಕ ವ್ಯಕ್ತವಾಗಿದೆ. ಕಾರ್ಯಕರ್ತರು ಬೆನ್ನಿಗೆ ಚೂರಿ ಹಾಕಿದ ಮಹೇಶ್ ಕುಮಠಳ್ಳಿ ನಮ್ಮ ಕ್ಷೇತ್ರದ ಪಾಲಿಗೆ ಸತ್ತು …

Read More »

ಅತೃಪ್ತ ಶಾಸಕರ ನಡೆ ಬೇಸರ ತರಿಸಿದೆ: ಧ್ರುವನಾರಾಯಣ

ಚಾಮರಾಜನಗರ:ರಾಜಕಾರಣದಲ್ಲಿ ಗೆದ್ದಂತಹ ಶಾಸಕರಿಗೆ ಪಕ್ಷ ನಿಷ್ಠೆ ಇರಬೇಕು. ಇತ್ತೀಚಿನ ಈ ಬೆಳವಣಿಗೆಗಳು ಬಹಳ ನೋವು ತರುವಂತಹದ್ದು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದ್ದಾರೆ.ಹನೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಗೆದ್ದು ಅಧಿಕಾರಕ್ಕಾಗಿ ಹಪಹಪಿಸುವುದು ಸರಿಯಲ್ಲ,ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷಕ್ಕೆ ಗೌರವ ಕೊಡಬೇಕು. ಇದರಿಂದ ಜನರಿಗೂ ಸಹ ರಾಜಕಾರಣಿಗಳ ಮೇಲೆ ವಿಶ್ವಾಸ ಇರುತ್ತದೆ.ಮೂರು- ನಾಲ್ಕು ಬಾರಿ ಗೆದ್ದಿರುವವರಿಗೂ ಅಧಿಕಾರದ ಮೇಲೆ ಆಸೆ ಇರುತ್ತೆ, ಆದ್ರೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ ಎಂದರು.ಅನಿಲ್ …

Read More »

ಮೈತ್ರಿಯ ಮತ್ತೊಂದು ವಿಕೆಟ್ ಪತನ ನಿರೀಕ್ಷೆ

ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ರಾಜೀನಾಮೆ ಪರ್ವಕ್ಕೀಗ ಮತ್ತೊಂದು ಮೈತ್ರಿ ವಿಕೆಟ್ ಬೀಳುವ ನಿರೀಕ್ಷೆ ಇದೆ.‌ ಚಳ್ಳಕೆರೆ ಕಾಂಗ್ರೇಸ್ ಶಾಸಕ ಟಿ.ರಘುಮೂರ್ತಿ ರಾಜೀನಾಮೆ ಸಿಗುವ ‌ಸಾಧ್ಯತೆ ಹೆಚ್ಚಾಗಿದೆ. ಚಿತ್ರದುರ್ಗ ಜಿಲ್ಲೆಯ ಮಾಜಿ ಸಚಿವ ಹೆಚ್. ಆಂಜನೇಯ ಅವರ ನಡತೆಗೆ ಬೇಸರಗೊಂಡ ರಘುಮೂರ್ತಿ ರಾಜೀನಾಮೆ ನೀಡಬಹುದೆಂಬ ಮಾಹಿತಿ ದೊರೆತಿದೆ. ‌ ಸಮುದಾಯದ ಕಡೆಗಣನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ತಮ್ಮದೇ ಸಮುದಾಯದ ಹೀರೋ ರಮೇಶ್ ಜಾರಕಿಹೊಳಿ ಆದೇಶದ …

Read More »

ಜಾನುವಾರುಗಳನ್ನು ರಕ್ಷಿಸಿದ ವಿಶ್ವ ಹಿಂದುಪರಿಷತ್ ಕಾರ‍್ಯಕರ್ತರು.

ಚಿತ್ರದುರ್ಗ: ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ವಿಶ್ವ ಹಿಂದುಪರಿಷತ್ ಸಂಚಾಲಕ ರುದ್ರೇಶ್ ಮತ್ತು ಕಾರ್ಯಕರ್ತರು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದರು.ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಳ್ಳಿಯಿಂದ ಆಂದ್ರದ ಹಿಂದುಪುರಕ್ಕೆ ಅಕ್ರಮವಾಗಿ ಸಾಗಿಸಲಾಗುತಿದ್ದ 100 ಜಾನುವಾರುಗಳು ಎಮ್ಮೆ ಮತ್ತು ಹಸುಗಳನ್ನು ರಕ್ಷಿಸಲಾಯಿತು.ಸರಿಯಾದ ಮಾಹಿತಿ ನೀಡಲು ವಿಫಲವಾದ ಹಿನ್ನಲೆಯಲ್ಲಿ ಜಾನುವಾರುಗಳನ್ನು ಚಳ್ಳಕೆರೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.ಜಾನುವಾರುಗಳನ್ನು ಗೋಶಾಲೆಗೆ ಒಪ್ಪಿಸಲಾಗಿದ್ದು, ಲಾರಿ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ.

Read More »

ಕಬ್ಬಿನ ಬೆಳೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ.

ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ ಮತ್ತು ಗೊರೂರು ಅಣೆಕಟ್ಟೆಗಳಿಂದ ಒಣಗುತ್ತಿರುವ ಕಬ್ಬಿನ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧಕ್ಕೆ ತಮ್ಮ ಸಾಕು ಪ್ರಾಣಿಗಳೊಂದಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರೈತನಾಯಕರಾದ ನಂದಿನಿಜಯರಾಮ್, ಮುದುಗೆರೆ ರಾಜೇಗೌಡ, ಮರುವನಹಳ್ಳಿ ಶಂಕರ್, ಲಕ್ಷ್ಮೀಪುರ ಜಗಧೀಶ್, ಮುದ್ದುಕುಮಾರ್, ನಾರಾಯಣಸ್ವಾಮಿ, ಬೂಕನಕೆರೆ ನಾಗರಾಜು, ಕರೋಟಿತಮ್ಮಯ್ಯ, ಕಾರಿಗನಹಳ್ಳಿ ಕುಮಾರ್, ಜಿ.ಪಂ ಮಾಜಿಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ಎ.ಎಲ್.ಕೆಂಪೂಗೌಡ ಸೇರಿದಂತೆ …

Read More »

*ಟಿ ಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ಮಾನ ನಷ್ಟ ಮೊಕದಮ್ಮೆ ಪ್ರಕರಣ .ಪ್ರಮೋದ್ -ಟಿಜೆ ಅಬ್ರಾಹಂ ನ್ಯಾಯಲಕ್ಕೆ ಹಾಜರು

ಟಿ ಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ .ಉಡುಪಿ: ಕಳೆದ ವಿಧಾನಸಭಾ ಚುನಾವಣಾ ಸಂಧರ್ಭ ಬೆಂಗಳೂರಿನ ಸಮಾಜಿಕ ಕಾರ್ಯಕರ್ತ ಟಿಜಿ ಅಬ್ರಾಹಂ, ಪ್ರಮೋದ್ ಮಧ್ವರಾಜ್ ವಿರುದ್ದ 193 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಭಂಧಿಸಿ ಪ್ರಮೋದ್ ಮಧ್ವರಾಜ್ ಉಡುಪಿ ನ್ಯಾಯಲಯದಲ್ಲಿ ಟಿಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.ಪ್ರಕರಣಕ್ಕೆ ಸಂಭಂಧಿಸಿದಂತೆ ಇಂದು ವಿಚಾರಣೆ ಪ್ರರಾಂಭವಾಗಿದೆ.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನ್ಯಾಯಲಕ್ಕ ಹಾಜರಾಗಿ …

Read More »

ಮೈತ್ರಿ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ: ಶಿವಶಂಕರ ರೆಡ್ಡಿ

ಚಿಕ್ಕಬಳ್ಳಾಪುರ: ಮೈತ್ರಿ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ರಾಜೀನಾಮೆ ಸಲ್ಲಿಸಿದರೆ ಸ್ಪೀಕರ್ ಅಂಗೀಕಾರ ಮಾಡಬೇಕಾಗುತ್ತದೆ.‌ಮುಂದೆ ಗವರ್ನರ್ ಯಾವ ರೀತಿ ಕ್ರಮ ವಹಿಸ್ತಾರೆ ಕಾದು ನೋಡೋಣ‌ ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದರು. ‌ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ಮಟ್ಟದಲ್ಲಿ ರಾಜೀನಾಮೆ ನನಗೆ ಆಶ್ಚರ್ಯ ಆಗುತ್ತಿದೆ.ರಾಜಕಾರಣದಲ್ಲಿ ಯಾವ ರೀತಿಯ ಪರಿಸ್ಥಿತಿ ಬಂದರೂ ನಾವು ಎದುರಿಸಬೇಕಾಗುತ್ತದೆ ಎಂದರು.ಮತ್ತೊಂದು ಸರ್ಕಾರ ರಚನೆ ಮಾಡೋಕೆ ಆಹ್ವಾನ …

Read More »

ಗ್ರಾಮ ಪಂಚಾಯತಿ ಸದಸ್ಯರ ವಜಾ.

ಆನೇಕಲ್: ಗ್ರಾಮ ಪಂಚಾಯತಿ ಸದಸ್ಯರ ಪತಿರಾಯರ ದರ್ಬಾರ್ ನಿಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸೇರಿದಂತೆ ಇಬ್ಬರು ಸದಸ್ಯರನ್ನು ವಜಾಗೊಳಿಸುವ ಮೂಲಕ ಇಂದು ಗ್ರಾಮ ಪಂಚಾಯತಿಯಲ್ಲಿ ನಡೆಯಬೇಕಿದ್ದ ಉಪಾಧ್ಯಕ್ಷರ ಚುನಾವಣಾಗೆ ಮೂವರ ಸದಸ್ಯರನ್ನು ವಜಾಗಿಳಿಸಿ ಆದೇಶ ಹೊರಡಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.ಹೌದು ಕೆಲ ದಿನಗಳ ಹಿಂದೆ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಧಿಕಾರಿಗಳಿಗೆ ಜೀವ ಬೆದರಿಕೆ …

Read More »

ಮತ್ತೆ ಏರಿಕೆಯಾದ ಕೃಷ್ಣ ನದಿ ಒಳ ಹರಿವು

ಚಿಕ್ಕೋಡಿ: ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಳವಾಗಿದೆ. ಕೃಷ್ಣಾ ನದಿಗೆ ಸುಮಾರು ೨೨೦೦೦ ಸಾವಿರ ಕ್ಯೂಸೆಕ್ಸ ನೀರು ಹರಿದು ಬರುತ್ತಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆಳ ಹಂತದ ಬೋಜ- ಕಾರದಗಾ, ಭೋಜವಾಡಿ- ಕಣ್ಣೂರ- ಮಲಿಕವಾಡ ದತವಾಡ ಸೇತುವೆಗಳು ಜಲಾವೃತಗೊಂಡಿವೆ.‌ ೩ ಸೇತುವೆಗಳು ಸಹ ದೂಧಗಂಗಾ ನದಿಗೆ …

Read More »