Breaking News

ಕರ್ನಾಟಕ

ಸಿದ್ದರಾಮಯ್ಯನವರು ಸಭೆಯಲ್ಲಿ ಯಾವುದೇ ಪತ್ರ ಹರಿದಿಲ್ಲ: ಸಂತೋಷ ಲಾಡ್

ಹುಬ್ಬಳ್ಳಿ: ಖರ್ಗೆಯವರು ದೆಹಲಿಯಲ್ಲಿ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತೇನೆ. ಪಕ್ಷ ಸಂಘಟನೆ, ಪಾಲಿಸಿ ಮೇಕಿಂಗ್, ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲು ಕರೆದಿದ್ದಾರೆ. ಸಿದ್ದರಾಮಯ್ಯನವರು ಸಭೆಯಲ್ಲಿ ಯಾವುದೇ ಪತ್ರ ಹರಿದಿಲ್ಲ. ನಾನು ಸಭೆಯಲ್ಲಿ ಇದ್ದೆ. ಲೆಟರ್ ಹರಿದಿದ್ದಂತೂ ನಾನು ನೋಡಿಲ್ಲ. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕರಿಸಲಾಗುತ್ತಿದೆ. ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಣ ನೀಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತಾನಾಡಿದ ಅವರು, ಅಸಮಾಧಾನಗೊಂಡ ಶಾಸಕರ ಪತ್ರವನ್ನು …

Read More »

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಆಟೋ ಚಾಲಕರಿಂದ ಬೃಹತ್ ಪ್ರತಿಭಟನೆ…

ಹುಬ್ಬಳ್ಳಿ : ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಅನ್ಯಾಯವಾಗುತ್ತಿದೆ. ಸರಿಯಾದ ದುಡಿಮೆ ಇಲ್ಲದೆ ಪರದಾಡುತ್ತಿರುವ ಹಿನ್ನಲೆಯಲ್ಲಿ, ಇಂದು ಹುಬ್ಬಳ್ಳಿ ಧಾರವಾಡ ಅವಳಿ ನಗರದ ಆಟೋ ಚಾಲಕರ ಸಂಘ ಸಂಪೂರ್ಣ ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಿದ ಆಟೋ ಚಾಲಕರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಆಟೋ ಚಾಲಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು. ಇನ್ನು, ಆಟೋ ಚಾಲಕರ ಪ್ರತಿಭಟನೆ ಹಿನ್ನೆಲೆಯಲ್ಲಿ, ಜಿಲ್ಲಾ …

Read More »

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯೇ ಅತ್ಯಾಚಾರ…

ಬೀದರ್​: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಮನುಕುಲವೇ ತಲೆ ತಗ್ಗಿಸುವಂಥ ದುಷ್ಕೃತ್ಯ ಬೆಳಕಿಗೆ ಬಂದಿದೆ. ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ರಾತ್ರಿ ಹೊತ್ತಿನಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆರೋಪಿ ಮಗಳ ಬಾಯಿ ಮುಚ್ಚಿ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ. ಬಾಲಕಿ ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದು ಕೇಳಲು ಬಂದ ಪತ್ನಿಯನ್ನೇ ಥಳಿಸಿ …

Read More »

ನವದಂಪತಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ…

ಬೆಂಗಳೂರು: ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ನಡೆದಿದೆ. ವಿಜಯಪುರ ಪಟ್ಟಣದ ನಿವಾಸಿ ರಮೇಶ್ (28) ಹಾಗು ಸಹನಾ (26) ಸಾವಿಗೆ ಶರಣಾದವರು. ಪ್ರೀತಿಸಿ ಮನೆಯವರ ವಿರೋಧದ ನಡುವೆ ಇವರು ಮದುವೆಯಾಗಿದ್ದರು. ವಿವಾಹವಾಗಿ ಪ್ರತ್ಯೇಕ ಮನೆ ಮಾಡಿಕೊಂಡಿದ್ದರು. ರಮೇಶ್ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನದ ಹಿಂದೆ ಬಿಜ್ಜವಾರ ಗ್ರಾಮದ ಸಂಬಂಧಿಕರ ಮನೆಗೆ ಇಬ್ಬರೂ …

Read More »

ಶೀತ, ಜ್ವರದಂತಹ ವೈರಾಣುಗಳಿಂದ ಮುಕ್ತರಾಗಬೇಕೆ!? – ಈ ಆಯಿಲ್ ಬಳಸಿದ್ರೆ 100% ರಿಸಲ್ಟ್

ಚರ್ಮಕ್ಕೆ ತುಂಬಾ ಉತ್ತಮ ಎಸೆನ್ಷಿಯಲ್ ಆಯಿಲ್. ಈ ಎಸೆನ್ಷಿಯಲ್ ಆಯಿಲ್ ಅನ್ನು ಬಳಸಿ ಮನೆಯನ್ನು ಕೂಡ ಸ್ವಚ್ಛಗೊಳಿಸಬಹುದು.ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ, ಆಯಂಟಿ ವೈರಲ್ ಮತ್ತು ಶೀಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಇದರಿಂದ ಮನೆಯನ್ನು ಸ್ವಚ್ಛಗೊಳಿಸಿದರೆ ಶೀತ, ಜ್ವರದಂತಹ ವೈರಾಣುಗಳಿಂದ ಮುಕ್ತರಾಗಬಹುದು. ಲ್ಯಾವೆಂಡರ್ ಆಯಿಲ್ ಇದು ಶಾಂತವಾದ ಪರಿಮಳವನ್ನು ಹೊಂದಿದ್ದು, ಇದು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಇದನ್ನು ಬಟ್ಟೆ ಮತ್ತು ಮನೆಯನ್ನು ಸ್ವಚ್ಛಗೊಳಸಲು ಬಳಸಬಹುದು. ಪೆಪ್ಪರ್ …

Read More »

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಸಿದ ಸಿಎಂ ಸಿದ್ದರಾಮಯ್ಯ…

ಮಂಡ್ಯ: ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಇಂದು ಸಿಎಂ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದು, ಮಂಡ್ಯ ತಾಲೂಕಿನ ಗುಮ್ಮಡಹಳ್ಳಿ ಗೇಟ್ ಹೆದ್ದಾರಿ ವೀಕ್ಷಣೆ ನಡೆಸಿದ್ದಾರೆ. ಅಪಘಾತ ಹೆಚ್ಚಾದ ಹಿನ್ನೆಲೆ ಅಳವಡಿಸಿದ 360° ಕ್ಯಾಮರಾ ವೀಕ್ಷಿಸಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಪೀಡ್ ಡಿಟೆಕ್ಟರ್ ಗೆ ಚಾಲನೆ ನೀಡಿದ್ದು, ಹೊಸ ತಂತ್ರಜ್ಞಾನ ಬಳಸಿ ಸ್ವೀಡ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ವಾಹನಗಳ ವೇಗ ಕ್ಯಾಪ್ಚರ್ ಮಾಡಲು ಎಐ ತಂತ್ರಜ್ಞಾನ ಬಳಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, …

Read More »

ಆಧಾರ್ ಮಾಡಿಸಿ 10 ವರ್ಷ ಆಯ್ತಾ: Update ಮಾಡಿಲ್ಲವೆಂದರೇ ನಿಷ್ಕ್ರೀಯ ಖಚಿತ.

ಆಧಾರ್ ಕಾರ್ಡ್ ಪಡೆದು 10 ವರ್ಷ ಮೇಲ್ಪಟ್ಟ ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ್ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಯ.ಐ.ಡಿ.ಎ.ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ ಮಾಡಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ …

Read More »

ವಿದ್ಯುತ್ ಶಾರ್ಟಸರ್ಕ್ಯೂಟ ಮನೆಗೆ ಬೆಂಕಿ…

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಬಸ್ತಿಕೇರಿಯಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟದಿಂದ ಮನೆಗೆ ಬೆಂಕಿ ಬಿದ್ದು ಟಿವಿ,ಮೊಬೈಲ್ ಸೇರಿದಂತೆ ಅನೇಕ ಮನೆಯ ಸಾಮಗ್ರಿಗಳು ಹಾನಿಗೊಳಗಾದ ಘಟನೆ ಜರುಗಿದೆ.ಬಸ್ತಿಕೇರಿಯ ನಿವಾಸಿಯಾದ ಪರಮೇಶ್ವರಪ್ಪ ಮಹಾರುದ್ರಪ್ಪ ಯರ್ಲಗಟ್ಟಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಮನೆಗೆ ಬೆಂಕಿ ಬಿದ್ದಿದ್ದು ನಂತರ ಅಕ್ಕಪಕ್ಕದ ಮನೆಯವರು ಬಂದು ಬೆಂಕಿ ನಿಂದಿಸಿದ್ದಾರೆ‌.ಯಾವುದೇ ಪ್ರಾಣಹಾನಿಯಾಗಿಲ್ಲ.

Read More »

ಮಗುವಿಗೆ ಲಿವರ್ ನೀಡಿ ಜೀವದಾನ ಮಾಡಿದ ತಂದೆ..

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಸಮಸ್ಯೆ ವಯಸ್ಕರ ಹಾಗೆಯೇ ಮಕ್ಕಳಲ್ಲಿ ಕೂಡ ಕಾಡುತ್ತಿದೆ. ಈ ನಿಟ್ಟಿನಲ್ಲಿ ತಂದೆಯೊಬ್ಬ ಮಗುವಿನ ಕಾಯಿಲೆಗೆ ತನ್ನ ಯಕೃತ್ತನ್ನು ನೀಡುವ ಮೂಲಕ ಮಗುವಿಗೆ ಮರು ಜನ್ಮ ನೀಡಿರುವ ವಿಶೇಷ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಸ್ತುತ ದಿನಮಾನಗಳಲ್ಲಿ ವಯಸ್ಕರಿಗಿಂತ ಮಕ್ಕಳ ಲಿವರ್ ಸಮಸ್ಯೆ ಸಾಕಷ್ಟು ಸವಾಲಿನೊಂದಿಗೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಈ ಮೊದಲು ವಯಸ್ಕರಲ್ಲಿ ಹಾಗೂ ಅತಿಯಾದ ಮದ್ಯಪಾನ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಿವರ್ ಸಂಬಂಧಿಸಿದ ಕಾಯಿಲೆಗಳು ಹಾಗೂ …

Read More »

ಮುಸ್ಲಿಂ ಅಧಿಕಾರಿಗಳು ಜಿಲ್ಲೆಗೆ ಬೇಡ ಎನ್ನುತ್ತಿರುವ ಕೈ ನಾಯಕರು – ಮುಂದೆ ಲೆಟರ್ ಕೊಟ್ಟು ಹಿಂದೆ ಮತ್ತೆ ತಡೆ ಹಿಡಿದವರು ಯಾರು…?

ಧಾರವಾಡ : ಬಿಜೆಪಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಬರಪುರ ಗ್ಯಾರಂಟಿಗಳ ಮೂಲಕ ಜನ ಮನ್ನಣೆ ಗಳಿಸುತ್ತಾ ರಾಜ್ಯಬಾ(ಭಾ)ರ ಮಾಡುತ್ತಿದೆ ಆದರೆ ಧಾರವಾಡ ಜಿಲ್ಲೆಯ ಆಯಕಟ್ಟಿನ ಹುದ್ದೆಗಳ ಆಯ್ಕೆಯ ವಿಚಾರದಲ್ಲಿ ಮಾತ್ರ ಕುಂಟುತ್ತಾ ಸಾಗುತ್ತಿರುವುದು ಸ್ಪಷ್ಟವಾಗಿದೆ ಇದಕ್ಕೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಅಧ್ಯಕ್ಷರುಗಳ ಕಿತ್ತಾಟ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆಇನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಜೆಪಿ ಆಡಳಿತ ಅವಧಿಯಲ್ಲಿ ಇದ್ದ …

Read More »