Breaking News

ಕರ್ನಾಟಕ

ಧಾರವಾಡ ಆಲೂರ್ ವೆಂಕಟರಾವ್ ಪ್ರೌಢಶಾಲೆ ಸಾಧನಕೇರಿಯಲ್ಲಿ ವನಮಹೋತ್ಸವ: ರೆಡ್ ಕ್ರಾಸ್ ಸಂಸ್ಥೆಯಿಂದ ಕಾರ್ಯಕ್ರಮ.

ವನಮಹೋತ್ಸವ ಕಾರ್ಯಕ್ರಮವನ್ನು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ನಮ್ಮ ಭಾಗದ ಶಾಸಕರಾದ ವಿನಯ್ ಕುಲಕರ್ಣಿ ಇವರ ಧರ್ಮಪತ್ನಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲೆಯ ಪ್ರಧಾನ ಗುರುಗಳಾದ ಐ ಎಂ ಪೀರಜಾದೆ ಹಾಗೂ ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ವೀರಾಪುರ್ ಹಾಗೂ ಕಾರ್ಯದರ್ಶಿಗಳಾದ ಡಾ!! ಉಮೇಶ್ ಹಳ್ಳಿಕೇರಿ ಹಾಗೂ ಡಾ!!ಪ್ರಕಾಶ್ ಪವಾಡ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಮತಿ …

Read More »

ಜನರ ಮನಸೆಳೆದ ಜವಾರಿ ಎತ್ತುಗಳು

ನವಲಗುಂದ : ಪಟ್ಟಣದ ಅಕ್ಕಿ ಓಣಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯ ಮಾಸದ ಕೊನೆಯ ವಾರದ ಪ್ರಯುಕ್ತ ಗುರು ಹಿರಿಯರು, ಯುವಕರು ಸೇರಿ ಮಣ್ಣಿನಿಂದ ಜವಾರಿ ಎತ್ತಿನ ಹೋರಿಗಳನ್ನು ನಿರ್ಮಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿರುತ್ತಾರೆ. ವಿವೇಕಾನಂದ ಯುವಕ ಮಂಡಳಿ ಅಕ್ಕಿ ಓಣಿಯ ಯುವಕರ ಕೈಯಲ್ಲಿ ಮೂಡಿಬಂದ ಎತ್ತುಗಳು ನೋಡುವರ ಕಣ್ಮನ ಸೆಳೆಯುತ್ತಿವೆ.

Read More »

ಮೇವಿನ ಗಾಡಿ ತಳ್ಳಿದ ಸಚಿವ ಸಂತೋಷ್ ಲಾಡ್-

ಹುಬ್ಬಳ್ಳಿ: ಬೆಳಗಿನ ವಾಯು ವಿಹಾರಕ್ಕೆ ಹೋಗಿದ್ದ ಸಚಿವ ಸಂತೋಷ್ ಲಾಡ್ ರೈತರೊಬ್ಬರ ಮೇವಿನ ಗಾಡಿಯಲ್ಲಿ ತಳ್ಳಿಕೊಂಡು ಊರಿಗೆ ಬಂದಿದ್ದಾರೆ. ಅಲ್ಲದೇ ರೈತನ ಮನೆವರೆಗೂ ಮೇವಿನ ಗಾಡಿಯನ್ನು ತಲುಪಿಸಿದ್ದಾರೆ. ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ರೈತ ದಂಪತಿ ಹೊಲದಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದರು. ಸಚಿವ ಸಂತೋಷ ಲಾಡ್ ಅವರು, ತಮ್ಮ ಕಲಘಟಗಿ ನಿವಾಸಕ್ಕೆ ಬಂದಾಗ ಎಂದಿನಂತೆ ಅದೇ ಮಾರ್ಗದಲ್ಲಿ ವಾಕಿಂಗ್ ಹೋಗುತ್ತಿದ್ದರು. ರೈತನ ಹುಲ್ಲಿನ ಬಂಡಿ ನೋಡಿ ಸ್ವತಃ ಸಂತೋಷ ಲಾಡ್ …

Read More »

ಜೈನ ಮುನಿಗಳ ಹತ್ಯೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ : ಜೈನ ಮುನಿಗಳ ಹತ್ಯೆ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಯುವ ಬಿಗ್ರೇಡ್ ಹಾಗೂ ಹಿಂದೂ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜೈನಮುನಿಗಳಾದ ಕಾಮಕುಮಾರ ನಂದಿಮಹಾರಾಜರ ಹತ್ಯೆ ಹಾಗೂ ಟಿ ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಬರ್ಬರವಾಗಿ ಹತ್ಯೆಗೈದ ಪ್ರಕರಣ ಖಂಡನೀಯ ಎಂದು ಮೌನ …

Read More »

ಸಾಲಬಾಧೆ ತಾಳಲಾರದೇ ನೇಣು ಕುಣಿಕೆಗೆ ಕೊರಳೊಡ್ಡಿದ ರೈತ

ಧಾರವಾಡ: ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೇ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಇರುವ ಸೈಬನಕೊಪ್ಪ ಗ್ರಾಮದಲ್ಲಿ ನಡೆದಿದೆ. ಉಪ್ಪಿನ ಬೆಟಗೇರಿ ಗ್ರಾಮದ ಕಲ್ಲಪ್ಪ ಕುರಗುಂದ (55) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡವನು. ಕೃಷಿ ಚಟುವಟಿಕೆಗಾಗಿ ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದ. ಅಲ್ಲದೇ ತನಗಿದ್ದ ಜಮೀನನ್ನು 7 ಲಕ್ಷ ರೂಪಾಯಿಗೆ ಲೀಸ್‌ನಲ್ಲಿ ಹಾಕಿಕೊಂಡಿದ್ದ. ಮಳೆಯಾಗದ ಕಾರಣ ಕೃಷಿ …

Read More »

ಪಾಪಿ ಗಂಡನಿಂದ ಮುಗ್ದ ಹೆಂಡತಿಯ ಕೊಲೆ , ಬೆಚ್ಚಿ ಬಿದ್ದ ಹುಬ್ಬಳ್ಳಿ ಜನ…

ಹುಬ್ಬಳ್ಳಿ : ಹುಬ್ಬಳ್ಳಿಯ ಆನಂದ ನಗರದಲ್ಲಿ ಇಂದು ಬೆಳಂ ಬೆಳಿಗ್ಗೆ ಪತ್ನಿ ಕೊಲೆ ಮಾಡಿದ್ದಾನೆ.ಹುಬ್ಬಳ್ಳಿಯ ಆನಂದ ನಗರದಲ್ಲಿ ಈ ಘಟನೆ ಸಂಭವಿಸಿದ್ದು ಮಂಜುಳಾ ಮುತ್ತಿಲಗೇರಿ ( 48)ಮೃತ ದುರ್ದೈವಿಯಾಗಿದ್ದು, ಕೊಡಲಿಯಿಂದ ಕೊಲೆ ಮಾಡಿದ್ದಾನೆ, ಕುಡಿದು ಜಗಳಮಾಡಿ ನಂತರದಲ್ಲಿ ಮತ್ತಿನಲ್ಲಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ತದನಂತರದಲ್ಲಿಪೋಲಿಸ್ ಠಾಣೆಗೆ ಆರೋಪಿ ಸೆಲೆಂಡರ ಹಾಗಿದ್ದಾನೆ.ಬೀಮಪ್ಪ ಎಂಬ ವ್ಯಕ್ತಿ ಕೊಲೆ ಮಾಡಿದ ಆರೋಪಿಯಾಗಿದ್ದು, ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಘಟನೆಗೆ ಸಂಭಂದಿಸಿದಂತೆ ಪ್ರಕರಣ ದಾಖಲು …

Read More »

ಸಿಎಂ ನಿಂಬಣ್ಣವರ್ ನಿಧನಕ್ಕೆ ಶಾಸಕ ಮಹೇಶ್ ತೆಂಗಿನಕಾಯಿ ಸಂತಾಪ

ಕಲಘಟಗಿ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಶ್ರೀ ಸಿಎಂ ನಿಂಬಣ್ಣವರ್ ಅವರನ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದ್ದು ಸರಳ ಸಜ್ಜನಿಕೆ ವ್ಯಕ್ತಿತ್ವದ ಮಾಜಿ ಶಾಸಕರಾದ ಶ್ರೀ ಸಿಎಂ ನಿಂಬಣ್ಣವರ್ ರೈತ ಹೋರಾಟಗಾರರು ಇವರ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದ್ದು ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಿ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ಶಾಸಕರಾದ ಶ್ರೀ ಮಹೇಶ್ ತೆಂಗಿನಕಾಯಿಯವರು …

Read More »

ಕಲಘಟಗಿ ಮಾಜಿ ಶಾಸಕ ಸಿ ಎಂ ನಿಂಬಣ್ಣವರ ನಿಧನ

ಕಲಘಟಗಿ: ಕಲಘಟಗಿ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ.ಎಂ ನಿಂಬಣ್ಣವರ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯ ಸಂಬಂಧಿಸಿದ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read More »

ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯಾತ್ರಿಗಳ ವಿಚಾರ :ಸಚಿವ ಹೆಚ್ ಕೆ ಪಾಟೀಲ

ಗದಗ:ನಲ್ಲಿ ಕಾನೂನು ಮತ್ತು ಪ್ರವಾಸೋಧ್ಯಮ ಸಚಿವ ಹೆಚ್ ಕೆ ಪಾಟೀಲ ಸುದ್ದಿಗೋಷ್ಟಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಅಮರನಾಥ್ ಆಡಳಿತ ತುಂಬಾ ಸ್ಪಂದಿಸಿದೆ ನಿನ್ನೆಯ ದಿನ ಪಂಚತರಣಿ ಬೇಸ್ ಕ್ಯಾಂಪಿನಲ್ಲಿ ಅವ್ರನ್ನ ಸುರಕ್ಷಿತವಾಗಿ ಇಡಲಾಗಿತ್ತು ಯಾತ್ರಿಕರ ಕುಟುಂಬಸ್ಥರ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿಯವರ ಜೊತಗೆ ಮಾತನಾಡಿದ್ದೆನೆ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ತಂಡ ರಚಿಸಿ ಧಾವಿಸಲು ಸೂಚಿಸಿದ್ದಾರೆ ಈಗಾಗಲೇ ಕೆಲ ಅಧಿಕಾರಿಗಳು ದೆಹಲಿ, ಶ್ರೀನಗರ ಸೇರಿ ವಿವಿಧೆಡೆ ಹೋಗಿದ್ದಾರೆ ಕರ್ನಾಟಕ …

Read More »

ಅಮರನಾಥ ಯಾತ್ರಾರ್ಥಿಗಳು ಅತಂತ್ರ; ಕನ್ನಡಿಗರ ಏರ್‌ಲಿಫ್ಟ್

ಅಮರನಾಥದಲ್ಲಿ ಪರದಾಡುತ್ತಿರುವ ಕರ್ನಾಟಕದ ಯಾತ್ರಾರ್ಥಿಗಳನ್ನು ಏರ್‌ಫ್ಟ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಗದಗ, ಧಾರವಾಡದ ಯಾತ್ರಾರ್ಥಿಗಳು ಸದ್ಯ ಪಂಚತರಣಿ ಬೇಸ್ ಕ್ಯಾಂಪ್‌ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಗದಗ: ಅಮರನಾಥದಲ್ಲಿ ಹವಾಮಾನ ವೈಪರೀತ್ಯ ಹಾಗೂ ಭೂ ಕುಸಿತದಿಂದಾಗಿ ಅಮರನಾಥ ಯಾತ್ರೆ ಕೈಗೊಂಡಿದ್ದ 300ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಿಲುಕಿಗೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಒಟ್ಟು 80 ಜನರಲ್ಲಿ ಗದಗನ 23 ಯಾತ್ರಾರ್ಥಿಗಳು ಸಹ ಸಿಲುಕಿಕೊಂಡಿದ್ದರು. ಇದೀಗ ಏರ್‌ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ.

Read More »