BigTv News
November 30, 2023
ಕರ್ನಾಟಕ, ಬೆಂಗಳೂರು, ಸಿನಿಮಾ, ಸುದ್ದಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಭರ್ಜರಿ ಬ್ಯಾಚುಲರ್ಸ್’ ಶೋವಿನಲ್ಲಿ ರುದ್ರ ಮಾಸ್ಟರ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ಚಂದನಾ ಅನಂತಕೃಷ್ಣ ಶೋವಿನಿಂದ ಅರ್ಧಕ್ಕೆ ಹೊರಬಂದಿದ್ದರು. ಆದರೆ, ಅವರು ಯಾಕೆ ಶೋವಿನಿಂದ ಅರ್ಧಕ್ಕೆ ಹೊರಬಂದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು, ಚಂದನಾ ಅನಂತಕೃಷ್ಣ ಅವರು ಇದೀಗ ನಟನೆಯ ಮೂಲಕ ನಿಮ್ಮ ಮನ ಸೆಳೆಯಲಿದ್ದಾರೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಚಂದನಾ ಅನಂತಕೃಷ್ಣ ನಟಿಸಲಿದ್ದಾರೆ. ಜೀ ಕನ್ನಡ ವಾಹಿನಿಯು …
Read More »
BigTv News
November 30, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವವರನ್ನೂ ಮಾನವೀಯವಾಗಿ ನಡೆಸಿಕೊಂಡು ಆರೋಗ್ಯ ಸೇವೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್ ಗಳನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದ ಅವರು, ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ …
Read More »
BigTv News
November 30, 2023
ಕರ್ನಾಟಕ, ಚಿಕ್ಕಬಳ್ಳಾಪುರ, ಸುದ್ದಿ
ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್’ನಿಂದ ಚಿಕ್ಕಬಳ್ಳಾಪುರದ ಬಳಿ ಆದಿಯೋಗಿ ಪ್ರತಿಮೆ ಸ್ಥಾಪನೆಯಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇದನ್ನೇ ಬಂಡವಾಳ ಮಾಡಿಕೊಂಡ ಬೆಂಗಳೂರಿನ ಸ್ಕೈಬರ್ಡ್ ಅಡ್ವೆಂಚರಸ್ ಸಂಸ್ಥೆ ಇಶಾ ಫೌಂಡೇಶನ್ ಸಮೀಪ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ಯಾರಾಗ್ಲೆಡಿಂಗ್ ಮಾಡುವಾಗ ಆದಿಯೋಗಿ ಪ್ರತಿಮೆಯನ್ನು ಮೇಲಿನಿಂದ ಪಕ್ಷಿಯಂತೆ ಹಾರಿ ವೀಕ್ಷಿಸಬಹುದಾಗಿದೆ. ಈಗ ಮೊದಲ ಹಂತದ ಪ್ರಾಯೋಗಿಕ ಹಾರಾಟ ಚಿಕ್ಕಬಳ್ಳಾಪುರದಲ್ಲಿ ಯಶಸ್ವಿಯಾಗಿದೆ.ಬುಧವಾರ ಪ್ರಾಯೋಗಿಕವಾಗಿ …
Read More »
BigTv News
November 30, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಗೆ ‘ಪಲ್ಲಕ್ಕಿ’ ಹೆಸರಿನ ನೂತನ ಸ್ಲೀಪರ್ ಮಾದರಿಯ ನಾನ್ ಎಸಿ ಬಸ್ ಸೇರ್ಪಡೆಯಾಗಲಿದೆ. ಇದರ ಜೊತೆಗೆ ಐಷಾರಾಮಿ 4 ‘ಅಂಬಾರಿ ಉತ್ಸವ’ ಬಸ್ಗಳು ಸೇರಲಿವೆ.ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದೆ. ಯುರೋಪಿಯನ್ ಮಾದರಿಯ ಮಲ್ಟಿ ಆಕ್ಸೆಲ್ ಹವಾನಿಯಂತ್ರಣ ಸಹಿತ ಸ್ಲೀಪರ್ ಬಸ್ಗಳು ಸಂಸ್ಥೆಗೆ ಸೇರಲಿವೆ. ಆದರೆ ಯಾವ ಮಾರ್ಗದಲ್ಲಿ ಈ ಬಸ್ ಸಂಚಾರ ನಡೆಸಲಿವೆ ಎಂಬುದು …
Read More »
BigTv News
November 30, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಈ ವರ್ಷ ಮಳೆ ಕೈಕೊಟ್ಟಿದ್ದು, ರಾಜ್ಯದೆಲ್ಲೆಡೆ ಬರಗಾಲದ ಛಾಯೆ ಆವರಿಸಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದ್ದರೆ, ಇತ್ತ ರೈತರ ಬದುಕು ಕೂಡ ಸಂಕಷ್ಟಕ್ಕೆ ಸಿಲುಕಿದೆ. ನಿರೀಕ್ಷಿಸಿದ ಮಟ್ಟಿಗೆ ಮಳೆಯಾಗದೇ ನೀರಿಲ್ಲದೇ ಬೆಳೆಗಳು ಜಮೀನುಗಳಲ್ಲೇ ಒಣಗಿ ನಾಶವಾಗುತ್ತಿದೆ.ಬರ ಹಾಗೂ ಇತರ ಸವಾಲುಗಳ ಮಧ್ಯೆಯೇ ರೈತರು ಈ ಬಾರಿ ಒಂದಿಷ್ಟು ಬೆಳೆಯನ್ನು ಬೆಳೆದಿದ್ದು, ಇದೀಗ ಫಸಲ ಮಾರಾಟಕ್ಕೆ ಸಿದ್ಧರಾಗಿದ್ದಾರೆ. ಹೀಗಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಗೆ …
Read More »
BigTv News
November 30, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರು ಧಾರಾವಾಹಿ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದಿದ್ದು, ತೀವ್ರಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಧಾರಾವಾಹಿ ಶೂಟಿಂಗ್ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣಲಿರುವ ಹೊಸ ಧಾರಾವಾಹಿ ‘ಆಸೆ’ ಶೂಟಿಂಗ್ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ …
Read More »
BigTv News
November 30, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಬಿಜೆಪಿಯಲ್ಲಿ ಎಲ್ಲವೂ ಹದಗೆಟ್ಟು ಹೋಗಿದೆ. ಮುಂಬರುವ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸ್ಥಾನಗಳಿಂದ ಅವರು ಹೀನಾಯ ಸೋಲು ಕಾಣಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಈ ಹಿಂದೆ 2018 ರಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸಭೆ ಚುನಾವಣಾ ನಡೆತು, ಆವಾಗ ಎಷ್ಟೇ ಗುದ್ದಾಡಿದರು ಕೊನೆಗೆ ಬಂದು ನಿಂತಿದ್ದು 104ಕ್ಕೆ. ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ. ಈಗ ಚುನಾವಣಾ …
Read More »
BigTv News
November 30, 2023
ಕರ್ನಾಟಕ, ತುಮಕೂರು, ಸುದ್ದಿ
ಅಮೃತ ಭಾರತ ನಿಲ್ದಾಣ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗಲಿದೆ. ಕಲ್ಪತರು ನಾಡಿನ ಹೊಸ ರೈಲ್ವೆ ನಿಲ್ದಾಣ ಸಾಕಷ್ಟು ಹೈಟೆಕ್ ಆಗಿರಲಿದ್ದು, ಇದರ ವಿಡಿಯೋವನ್ನು ನೈಋತ್ಯ ರೈಲ್ವೆ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ.ತುಮಕೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪರಿವರ್ತನೆಗೆ ಸಾಕ್ಷಿಯಾಗಿ, ಅಮೃತ್ ಭಾರತ್ ನಿಲ್ದಾಣಗಳ ಯೋಜನೆಯಡಿ ಅಭಿವೃದ್ಧಿಯನ್ನು ಬಿಂಬಿಸುವ ದರ್ಶನ.” ಎನ್ನುವ ಶೀರ್ಷಿಕೆಯಡಿ ಹೊಸ ರೈಲ್ವೆ ನಿಲ್ದಾಣ ಹೇಗಿರಲಿದೆ ಎನ್ನುವ ವಿಡಿಯೋವನ್ನು ಹಂಚಿಕೊಂಡಿದೆ.ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ನಗರದಲ್ಲಿ ರೈಲ್ವೆ …
Read More »
Shaikh BigTv
November 28, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
28ವರ್ಷಕ್ಕೆ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕ..!! 28 ವರ್ಷದ ಕಳ್ಳಾಟಕ್ಕೆ ಫುಲ್ ಸ್ಟಾಪ್ ಆರೋಪಿ ಅಂದರ್ ಮಾಡಿದ ಪೋಲಿಸ್ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ತಂಡ..!! ಹುಬ್ಬಳ್ಳಿ:- ಛೋಟಾ ಬಾಂಬೆಯ ಆರಕ್ಷಕರ ಕಾರ್ಯಕ್ಕೆ ಅವಳಿನಗರ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ 28 ವರ್ಷಗಳ ಹಿಂದಿನ ಕಹಾನಿಗೆ ಬೆಂಡಿಗೇರಿ ಪೊಲೀಸರು ಮುಕ್ತಿ ನೀಡಿದ್ದಾರೆ. ಪಾಪಿಗಳ ಲೋಕದಲ್ಲಿ ಕರಾಳ ಮುಖವಾಡ ಧರಿಸಿ ತಲೆಮರಿಸಿಕೊಂಡು ಅಲೆದಾಡುತ್ತಿದ್ದ ಆರೋಪಿಯನ್ನ ಠಾಣಾ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ …
Read More »
BigTv News
November 27, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಶಾಲ ಮೆಗಾ ಮಾರ್ಟ್ ಹತ್ತಿರ ಬೈಕ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ವಿದ್ಯಾನಗರದ ಪೊಲೀಸ್ ಇನ್ಸ್ಪೆಕ್ಟರ್ ಜಯಂತ ಗೌಳಿ ನೇತೃತ್ವದ ತಂಡ ಯಶಸ್ವಿಯಾಗಿದೆ.ಹುಬ್ಬಳ್ಳಿ, ಕಲಘಟಗಿಯಲ್ಲಿ ಕೂಡಾ ಬೈಕ್ ಕಳ್ಳತನವಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಳ್ಳನಿಂದ 2,60,000 ರೂಪಾಯಿ ಮೌಲ್ಯದ ಒಟ್ಟು 5 ದ್ವಿಚಕ್ರ ವಾಹನ ವಶ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಕಾರ್ಯ ವೈಕರಿಗೆ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Read More »